ಸಜ್ಜುಮಾಡು ಅಮ್ಮಾ ಎನ್ನ
ಎದುರಿಸಲು ಜಗವನು
ಎಷ್ಟು ಕಾಲ ಮಲಗಿರಲಿ
ನಿನ್ನ ಮಡಿಲನಲ್ಲಿಯೇ?
ಸಡಿಲಿಸಮ್ಮ ಮಮತೆ ಬಂಧ
ನೋಡಲು ಬಿಡು ಜಗವನು
ಸವಿಯಲು ಬಿಡು ಸೋಲ ಕಹಿಯ
ನೋಯಲು ಬಿಡು ಮನವನು
ನೊಂದು ಬೆಂದು ಮಾಗಿ ಮತ್ತೆ
ಬರುವೆ ನಿನ್ನ ಮಡಿಲಿಗೆ
ಆಗ ನೀಡು ಸಾಂತ್ವನವ
ಅಷ್ಟೇ ಸಾಕು ಬಾಳಿಗೆ
ಮಮಕಾರವ ದೂರುತಿಲ್ಲ
ಅಮ್ಮಾ ಘಾಸಿಪಡದಿರು
ಹಾರ ಬಯಸದೇನು ಹಕ್ಕಿ
ತನ್ನ ರೆಕ್ಕೆ ಬಲಿಯಲು?
ಗೊತ್ತು ಅಮ್ಮಾ ನಿನ್ನ ಪ್ರೀತಿ
ಆಕುಲತೆಯ ಮರೆಯಲಿ
ಅವಿತ ಅಮಿತ ಮಮತೆಯನ್ನು
ಹೇಗೆ ತಾನೇ ಹಳಿಯಲಿ?
ಹಾತೊರೆದಿದೆ ನನ್ನ ಮನವು
ಜಗದನುಭವ ಪಡೆಯಲು
ರೆಕ್ಕೆ ಹರಡಿ ಕ್ಷಿತಿಜದೆಡೆಗೆ
ಹಾರಿ ಹೋಗಿ ನೋಡಲು
ಅಮ್ಮಾ ಒಮ್ಮೆ ಕಳಿಸಿ ನೋಡು
ಸೇರುವೆನು ಗುರಿಯನು
ನಿನ್ನ ಹರಕೆ ಒಂದೇ ಸಾಕು
ಎದುರಿಸಲು ಜಗವನು
ವಸುಮತಿ ನಿಮ್ಮ ಬರುವಣಿಗೆ ತುಂಬ ಆಪ್ತ..........ಶಾಸ್ತ್ರಬದ್ದವಾದ ತುಂದರ ಸುಲಲಿತ ಕವಿತೆಗಳು. ಕವಿತೆಯಲ್ಲಿ ತಿಳುವಳಿಕೆ ನೀಡುವ ಅಂಶಗಳ ಇಲ್ಲಿದರುವುದಿಲ್ಲ. ನನಗಂತೂ ಓದುವುದೆಂದರೆ ತುಂಬ ಖುಷಿ
ಪ್ರತ್ಯುತ್ತರಅಳಿಸಿ