ಶನಿವಾರ, ಸೆಪ್ಟೆಂಬರ್ 15, 2012

ಸುಪ್ರಭಾತ


ಸುಪ್ರಭಾತಗಳನ್ನು ಬೆಳ್ಳಂಬೆಳಗ್ಗೆ ಹಾಕೋದು ಯಾರನ್ನು ಎಬ್ಬಿಸಲಿಕ್ಕೆ?
ಜೋಗುಳ ಹಾಡೋದು ಯಾರನ್ನ ಮಲಗಿಸ್ಲಿಕ್ಕೆ? 

 ದೇವರನ್ನಾ...? ಇಲ್ಲ  ಮನುಷ್ಯಾರನ್ನಾ.....? ಅನ್ನೋ ಯೋಚ್ನೆ ನನ್ನ ತಲೆ ತಿಂತಾ ಇದೆ.

ಅದು ದೇವರಿಗೇ ಅಂತಾದ್ರೆ. ಪಾಪ...... !ಆ  ದೇವರ  ತಲೆಕೆಡದೇ ಇರೋ ಹಾಗೆ ದೇವರೇ ಕಾಪಾಡಬೇಕು.

ಯಾಕೇಂದ್ರೆ, ಈಗ ಭಾರತದಲ್ಲಿ ಬೆಳಗ್ಗೆ ಅಂದುಕೊಂಡರೆ ಇಲ್ಲಿ ಜನ ದೇವ್ರೇ ಏಳಪ್ಪಾ, ಹೊತ್ತಾಯ್ತು ಸೂರ್ಯ ಬಂದಿದಾನೆ, ಅಂತ ನಾಲ್ಕು ಗಂಟೆಗೇ,  ಅದು ಸುಳ್ಳು ಅಂತ ಗೊತ್ತಿದ್ರೂ ಹಾಡ್ತಿದ್ರೆ, ಅಲ್ಲಿ ಆ  ಅಮೆರಿಕಾದಲ್ಲಿ ಜನ ಮಲಗ್ಲಿಕ್ಕೆ ತಯಾರಿ ಮಾಡ್ಕೊಂಡು 'ಕೃಷ್ಣಾ ಸದ್ದು ಮಾಡ್ದೇ ಮಲ್ಗು ಇಲ್ಲಾಂದ್ರೆ ಗುಮ್ಮನ್ನ ಕರೀತೀನಿ' ಅಂತ ಹೆದರಿಸ್ತಾರೆ.......

 ಅಮೇರಿಕದಲ್ಲಿ ಇವತ್ತು ಏಕಾದಶಿ ಉಪವಾಸ ಮಾಡು ಅಂದ್ರೆ, ಭಾರತದಲ್ಲಿ ಇವತ್ತು ದ್ವಾದಶಿ ಅಂತ ಭರ್ಜರಿ ನೇವೇದ್ಯ ಮುಂದಿಡ್ತಾರೆ.   ಈ ರೀತಿ ಗಿರಿಗಿರಿ ಬುಗುರಿ ಹಾಗೆ ಸುತ್ತೋ ಈ ಭೂಮಿ ಮೇಲೆ ಒ೦ದು ಭಾಗದಲ್ಲಿ ಏಳು ಅನ್ನೋವಾಗ ಇನ್ನೊ೦ದ್ ಕಡೆ ಸ್ನಾನ ಮಾಡಿಸ್ತಾರೆ ಮತ್ತೊಂದೆಡೆ ನೇವೇದ್ಯ ಮಾಡಿ, ಮುಖಕ್ಕೆ ಮಂಗಳಾರ್ತಿ ಎತ್ತಿ, ಮಾಡಿಟ್ಟ ಭಕ್ಷ್ಯಭೋಜ್ಯಗಳನ್ನು ಎತ್ತಿಕೊಂಡು, ದೇವರಮನೆ ಬಾಗಿಲು ಹಾಕಿಕೊಂಡು ಹೊರಟು ಬಿಡ್ತಾರೆ.

 ಇನ್ನು ಅವರು ನಾಳೆ ತನಕ ದೇವರನ್ನ  ಜ್ಞಾಪಿಸಿಕೊಳ್ಳೋದೂ ಇಲ್ಲ.


ದೇವರ ಬದಲಿಗೆ ಈ ಜಾಗದಲ್ಲಿ ಮನುಷ್ಯ ಇದ್ದಿದ್ರೆ ಊಟ ಮಾಡ್ಬೇಕೋ,ಉಪವಾಸ ಮಾಡ್ಬೇಕೋ, ಏಳ್ಬೇಕೋ, ಮಲಗ್ಬೇಕೋ, ಅನ್ನೋದು ಗೊತ್ತಾಗ್ದೇ ಅವನ ತಲೆ ಕೆಟ್ಟು ಕೆರ ಹಿಡ್ಕೊಂಡು ಹೋಗ್ತಾ ಇತ್ತು . ಅನ್ನೋದ್ರಲ್ಲಿ ಸಂಶಯನೇ ಇಲ್ಲ.


ಆದ್ದರಿಂದ ಅದು (ಸುಪ್ರಭಾತಗಳನ್ನು ಬೆಳ್ಳಂಬೆಳಗ್ಗೆ ಹಾಕೋದು, ಜೋಗುಳ ಹಾಡೋದು )   ಮನುಷ್ಯರಿಗೇ ಇರಬೇಕು ಅಂತ ತೀರ್ಮಾನಕ್ಕೆ ಬಂದು, ನನ್ನ ಮಗಳ ಹತ್ತಿರ ಹೇಳಿದೆ.

 ಆಗ ಅವಳು   '' ಅಮ್ಮಾ, ಅದು ದೇವರಿಗೆ ಹೇಳೋದು, ಆದ್ರೆ ದೇವರ ಮನೇಲಿರೋ ದೇವರಿಗಲ್ಲ ಮನುಷ್ಯರ ಮನಸ್ಸಿನಲ್ಲಿ ಇರೋ ದೇವರಿಗೆ''  ಅಂತ ಸರಳವಾಗಿ ಹೇಳಿಬಿಟ್ಲು

. ಅದೂ ನಿಜ ಅಲ್ವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ