ಗುರುವಾರ, ಆಗಸ್ಟ್ 13, 2015

ಆತ್ಮ ವಿಶ್ವಾಸ


ನಿನ್ನೆ ಪಾರ್ಟಿಗೆ ಹೋಗಿದ್ದಾಗ  `ಆಕೆ' ಸರಳ ಸುಂದರವಾಗಿ ಅಲಂಕರಿಸಿಕೊಂಡು, ಎಲ್ಲರ ಜೊತೆ ನಗುನಗುತ್ತಾ ಮಾತಾಡ್ತಿರೋದು ಕಂಡು ಸಂತೋಷವಾಯ್ತು.. ಹತ್ತಿರ ಹೋಗಿ ``ವಾವ್ ಎಷ್ಟು ಚಂದ ಕಾಣ್ತಿದೀರಿ... '' ಅಂತ  ಹೇಳ್ದೆ.
ನನಗೆ ಅಷ್ಟು ಆನಂದವಾಗಲಿಕ್ಕೆ ಕಾರಣ ಹೋದ ತಿಂಗಳು   ಇಂಧದ್ದೇ ಸಂಧರ್ಭದಲ್ಲಿ ಆದ ಘಟನೆ..

 ಅವತ್ತು ನಾವೆಲ್ಲಾ  ನಗ್ತಾ, ಜೋಕುಗಳನ್ನು ಹೇಳ್ತಾ ಕುಳಿತಿದ್ದಾಗ ಆಕೆಯೊಬ್ಬರೇ ಮ್ಲಾನ ವದನರಾಗಿ ಕುಳಿತಿದ್ದನ್ನು ಕಂಡು,,  ನಾನು `` ಯಾಕವರು ಒಬ್ಬರೇ ಕೂತಿದಾರೆ...?'' ಅಂತ ಕೇಳಿದೆ
 ``ಅವರೊಂಥರಾ .. ಯಾರ ಜೊತೆನೂ ಮಿಂಗಲ್ ಆಗಲ್ಲ...'' ಅನ್ನೋ ಉತ್ತರ ಬಂತು.
 ನನಗೆ ಸುಮ್ಮನಿರಲಾಗಲಿಲ್ಲ. ನಾನು ಅವರ ಹತ್ತಿರ ಹೋಗಿ, ಹಲೋ ನೀವು ಮಿಸೆಸ್......... ಅಲ್ಲವ? ನಾನು ಮಿಸೆಸ್ ಚಂದ್ರ, .. ಅಲ್ಲೇ ಬನ್ನಿ ಎಲ್ಲಾ ಒಟ್ಟಿಗೆ  ಮಾತಾಡ್ಬಹುದು...'' ಅಂತ ಮಾತಾಡ್ಸಿದೆ..
 ಅವರು`` ನಂಗೆ ಎಲ್ಲರ ಜೊತೆ ಮಾತಾಡಕ್ಕೆ ಬರಲ್ಲರಿ, ಸಂಕೋಚವಾಗುತ್ತೆ ಅಲ್ಲದೇ ನಿಮ್ಮಷ್ಟು ಚನ್ನಾಗಿಲ್ಲ... ''
ಸಂಕೋಚದ ಮುದ್ದೆಯಾಗಿ ಅವರು ಹೇಳ್ದಾಗ, ``ಇಲ್ಲ  ಮೇಡಂ,ನಿಮ್ಮ ಸೀರೆ ಚನ್ನಾಗಿದೆ ಅದನ್ನೇ ಸ್ವಲ್ಪ ನೀಟಾಗಿ ಉಟ್ಟರೆ  ನೀವು ಚನ್ನಾಗೇ ಕಾಣ್ತೀರಿ.. ಅಷ್ಟಕ್ಕೂ ಯಾರಂದರು ನೀವು ಚನ್ನಾಗಿಲ್ಲ ಅಂತ?  .. ಸೌಂದರ್ಯ ನೋಡೋರ ಕಣ್ಣಲ್ಲಿರುತ್ತೆ.. ನೀವು ನಗ್ನಗ್ತಾ  ಎಲ್ಲರ ಜೊತೆ ಮಾತಾಡಕ್ಕೆ ಶುರು ಮಾಡಿ.. ಏನೂ ಆಗಲ್ಲ ''  ಅಂದಾಗ.. ಅವರ ಮುಖದಲ್ಲಿ ಕೊಂಚ ಆತ್ಮವಿಶ್ವಾಸ ಕಂಡಿತ್ತು

 ಆಕೆ ಈಗ ಎಲ್ಲರೊಳಗೊಂದಾ ಗಿ ಮಾತಾಡಿದ್ದು ನನಗೆ ತುಂಬಾ ಆನಂದ ಅನಿಸಿತು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ