ಮಂಗಳವಾರ, ನವೆಂಬರ್ 1, 2016

ಹೆಜ್ಜೆ ಗುರುತುಗಳು

                                                  
  ಸಜ್ಜನ ಬಾಳ ಹಾದಿಯಲ್ಲಿ   ಸಾಗುತ್ತಿದ್ದ.. ತನ್ನೊಡನೆ ದೇವರಿದ್ದಾನೆಂಬ ವಿಶ್ವಾಸದಿಂದ... ಇಂದು ಕ್ಷಣ ಅವನು ಹಿಂತಿರುಗಿ ತಾನು ಸಾಗಿ ಬಂದ ದಾರಿಯ ಸಿಂಹಾವಲೋಕನ ಮಾಡಿದ.. ಅವನ ವಿಶ್ವಾಸ ಸತ್ಯವಾಗಿತ್ತು!! ದಾರಿಯುದ್ದಕ್ಕೂ ಎರಡು ಜೊತೆ ಹೆಜ್ಜೆ ಗುರುತುಗಳು!!
 ಆದರೆ ... ಇದೇನಿದು??? ಕೆಲವು ಸ್ಥಳಗಳಲ್ಲಿ ಮಾತ್ರ ಒಂದೇ ಜೊತೆ ??
 ಅವನು ಸಂದರ್ಭಗಳನ್ನು ಮೆಲುಕು  ಹಾಕುವಾಗ ಅವನು ಮ್ಲಾನ ಚಿತ್ತನಾದ.. ಕಾರಣ ಅವೆಲ್ಲವೂ ಆತನ ಅತ್ಯಂತ ದು:ಖದ, ದೀನಾವಸ್ಥೆಯಲ್ಲಿದ್ದ ದಿನಗಳಾಗಿದ್ದವು..
 ``ಸದಾ ನನ್ನೊಂದಿಗಿದ್ದ ದಯಾಮಯನಾದ ಭಗವಂತ ನಾನು ದು:ಖಿತನಾದಾಗ ಕೈಬಿಟ್ಟನೇ?;;.. ಅವನು ದೇವರನ್ನೇ `ಯಾಕೆ ನೀ ಹೀಗೆ ಮಾಡಿದೆ?.. ಸದಾ ನನ್ನೊಂದಿಗೆ ಇರುತ್ತೀ ಎಂದು ಎಷ್ಟು ದೃಢವಾಗಿ ನಂಬಿದ್ದೆನಲ್ಲ? ನನ್ನ ಹೀನಾವಸ್ಥೆಯಲ್ಲೇ ಒಂಟಿ ಮಾಡಿದ್ದು ನ್ಯಾಯವೇ?....'' ಎಂದು ದೈನ್ಯವಾಗಿ ಕೇಳಿದ..

 ಅದಕ್ಕೆ  ಕರುಣೆಯ ಜೇನಿನಲ್ಲದ್ದಿದಂಥ ಭಗವಂತನ   ದನಿ ಕೇಳಿ ಬಂತು `` ಮಗೂ, ನೀನು ತಪ್ಪು ತಿಳಿದಿದ್ದೀ.. ಯಾವಾಗ ನೀನು ಅತ್ಯಂತ ಶೋಕದಲ್ಲಿದ್ದೆಯೋ , ಜಾಗದಲ್ಲೆಲ್ಲಾ ನೀನು ಕಾಣುವ ಒಂದೇ ಜೊತೆ ಹೆಜ್ಜೆ ಗುರುತುಗಳು ನನ್ನವು.. ಆಗ ನಾನು ನಿನ್ನನ್ನು ನನ್ನ ಕೈಗಳಲ್ಲಿ ಎತ್ತಿಕೊಂಡು ನಡೆಯುತ್ತಿದ್ದೆ....''

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ