ಅಮೀಶ ಅವರು ರಚಿಸಿದ THE
IMMORTALS OF MELUHAS ಕಾದಂಬರಿಯಲ್ಲಿ ನನಗೆ ಅತಿಯಾಗಿ
ಮೆಚ್ಚಿಗೆಯಾದ, ಪದೇ ಪದೇ ಆ ಪುಟಗಳನ್ನು ಓದುವಂತೆ ಮಾಡುವ ಭಾಗವೆಂದರೆ ನಾಲ್ಕು ವರ್ಣಗಳನ್ನು ವಿಂಗಡಿಸುವ
ಪರಿ!
ಮೈಕಾ ಪದ್ಧತಿ ಎಂದು ಕರೆಯಲ್ಪಡುವ ಈ ಕ್ರಮ ಎಷ್ಟೊಂದು ವೈಜ್ಞಾನಿಕವಾಗಿದೆ
ಎಂದು ಅಚ್ಚರಿಯಾಗುತ್ತದೆ.
ದೇವೋತ್ತಮ ಶ್ರೀರಾಮಚಂದ್ರನಿಂದ ಆರಂಭವಾಯಿತು ಎನ್ನಲಾದ ಆ ಪದ್ಧತಿಯ ಪ್ರಕಾರ
ಪ್ರತಿ ಗರ್ಭಿಣಿ ಸ್ತ್ರೀಯೂ ಹೆರಿಗೆಯ ಸಮಯ ಬಂದಾಗ ನಗರದ ಹೊರಭಾಗದಲ್ಲಿರುವ, ಸುವ್ಯವಸ್ಥಿತವಾದ, ಪರಿಣಿತ
ವೈದ್ಯ ಬಳಗವನ್ನು ಹೊಂದಿದ ಆರೋಗ್ಯ ಕೇಂದ್ರಕ್ಕೆ ದಾಖಲಾಗಬೇಕು. ಅಲ್ಲಿ ಅವಳ ಪತಿಗಾಗಲೀ ಅಥವಾ ಉಳಿದ
ಕುಟುಂಬದ ಸದಸ್ಯರಿಗಾಗಲೀ ಪ್ರವೇಶ ಇರುವುದಿಲ್ಲ
.
ಪ್ರಸವದ ನಂತರ ಕೆಲ ಸಮಯದ ಆರೈಕೆ ಪಡೆದು ಆಕೆ ತನ್ನ ಮಗುವನ್ನು ಅಲ್ಲೇ ಬಿಟ್ಟು
ಸ್ವಗೃಹಕ್ಕೆ ಹಿಂತಿರುಗಬೇಕು......!
ಅಲ್ಲಿ ಎಲ್ಲಾ ಮಕ್ಕಳನ್ನು ಸಮಾನವಾದ ರೀತಿಯಲ್ಲಿ ಬೆಳೆಸಲಾಗುತ್ತದೆ. ಸಮಾನ
ಆಹಾರ, ಉಪಚಾರ, ಶಿಕ್ಷಣ ಎಲ್ಲವನ್ನೂ ನೀಡಲಾಗುತ್ತದೆ. ಮಕ್ಕಳಿಗೂ ತಂದೆತಾಯಿಗಳಿಗೂ ಯಾವುದೇ ಸಂಪರ್ಕವಿರುವುದಿಲ್ಲ
! ಅಲ್ಲದೇ ಅವರು ಯಾರ ಮಕ್ಕಳು ಎಂಬುದನ್ನು ಅತಿ ಗೋಪ್ಯವಾಗಿಡಲಾಗುತ್ತದೆ.
ಆ ಮಕ್ಕಳು, ಹದಿ ವಯಸ್ಸಿಗೆ ಕಾಲಿಟ್ಟಾಗ ಸೋಮರಸ ಎನ್ನುವ ಒಂದು ಅದ್ಭುತವಾದ
ಔಷಧವನ್ನು ನೀಡಲಾಗುತ್ತದೆ.ಮತ್ತು ಅವರು ಹದಿನೈದು
ವರ್ಷದವರಾದಾಗ, ಅವರನ್ನು ಸಮಗ್ರವಾದ ಪರೀಕ್ಷೆಗೊಳಪಡಿಸಲಾಗುತ್ತದೆ.
ಈ ಪರೀಕ್ಷಯ ಫಲಿತಾಂಶದ ಆಧಾರದಿಂದ ಅವರನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರರೆಂದು ವಿಭಾಗಿಸಲಾಗುತ್ತದೆ.
ಹಾಗಾಗಿ ಪ್ರತಿಯೊಬ್ಬರು ಅವರ ಸಾಮರ್ಥ್ಯ ಹಾಗೂ ಪ್ರತಿಭೆಯ ಆಧಾರದಿಂದ ಇಂಥ
ವರ್ಣಕ್ಕೆ ಸೇರಿದವರೆಂದು ಗುರುತಿಸಲ್ಪಡುತ್ತಾರೇ ವಿನಃ ಅವರ ಹುಟ್ಟಿಗೆ ಕಾರಣವಾದವರಿಂದಲ್ಲ........!
ನಂತರ ಎಲ್ಲರೂ ಅವರವರ ವರ್ಣಗಳಿಗೆ ಅನುಸಾರವಾಗಿ ಹೆಚ್ಚಿನ ವಿದ್ಯಾಭ್ಯಾಸ
ಮಾಡುತ್ತಾರೆ
.
ಆ ಸಮಯದಲ್ಲಿ ಯಾವ ಪಾಲಕರು ಸಂತಾನಾಪೇಕ್ಷಿಗಳಾಗಿ ಅರ್ಜಿ ಸಲ್ಲಿಸಿರುತ್ತಾರೋ
ಅವರಿಗೆ ಅವರ ವರ್ಣದ ಮಗುವನ್ನು ನೀಡಲಾಗುತ್ತದೆ
. ಅಂದರೆ ಉದಾಹರಣೆಗೆ ಬ್ರಾಹ್ಮಣ ತಂದೆ ತಾಯಿಗೆ ದೊರಕುವ
ಮಗು ಬೇರೆ ವರ್ಣಕ್ಕೂ ಸೇರಿರಬಹುದು. ಅವರು ಆ ಮಗುವನ್ನು ತಮ್ಮ ಸ್ವಂತ ಮಗುವಿನಂತೆ ಸಲಹುತ್ತಾರೆ.
ಇದರಿಂದ ಪ್ರತಿ ಮಗುವೂ ಜೀವನದಲ್ಲಿ ಬೆಳೆಯಲು ಹಾಗೂ ಬೆಳಗಲು ಸಮಾನ ಅವಕಾಶ
ಪಡೆಯುತ್ತದೆ.
ಇಂಥ ಸುವ್ಯವಸ್ಥೆ ಇಂದಿಗೂ ಇದ್ದಿದ್ದರೆ, ನಮ್ಮ ಸಮಾಜದ ಹಿನ್ನೆಡೆಗೆ ಮುಖ್ಯವಾದ
ಕಾರಣವಾದ. ಎಲ್ಲಾ ಸಮಸ್ಯೆಗಳಿಗೂ ಮೂಲವಾದ ಈ ಜಾತಿ ವೈಷಮ್ಯ, ಹೊಲಸು ಜಾತಿ ರಾಜಕಾರಣ, ನಾಚಿಕೆಗೇಡಿನ
ಅಸ್ಪೃಶ್ಯತೆ, ಅಸಮಾನತೆ ಯಾವುದೂ ಇರುತ್ತಿರಲಿಲ್ಲ ಅಲ್ಲವೇ.......?
idannu sarkarada gamankke tharuvudu Bharatha deshaa bahavishyada drustiyinda olleyadu.
ಪ್ರತ್ಯುತ್ತರಅಳಿಸಿ:)
ಪ್ರತ್ಯುತ್ತರಅಳಿಸಿ