ಬಿಸಿಲ ಭೀಕರತೆಯಲೂ
ಒಳಗೊಳಗೆ ಸಂಭ್ರಮಿಸಿ
ಒಬ್ಬಂಟಿಯಾದರೂ ಒಂಟಿಯಲ್ಲದ
ಲಲನೆ
ಸುಡುವ ಬಿಸಿಲಿನ ಬೇಗೆಯಲಿ
ಸುಖವಾಗಿ ಸಾಗುವಳು
ಜೊತೆಯಲ್ಲಿ ಮನದಲ್ಲಿ ಇರಲು ಅವನೆ
ಅವನ ಹಸ್ತ ಸ್ಪರ್ಶ ಹೃದಯಕ್ಕೆ ಸುಮ ಸ್ಪರ್ಶ
ರಾಗಸಂಗಮ ನೂರು ಭಾವಗೀತೆ
ಅವನೊಡನೆ ಇದ್ದ ಪ್ರತಿ
ಘಳಿಗೆಯೂ ಹೊಸ ಬಯಕೆ
ಏನೋ ಹೊಸ ಕನಸುಗಳ
ಹೆಣೆಯುತ್ತಿವೆ
ಏಕಾಂಗಿತನದಲೂ ಜೊತೆಯಲ್ಲಿವೆ
ಮಂದ ಮಾರುತ ಹೊತ್ತು ತಂದ ಆ ಪಿಸುಮಾತು
ಹಾಡುತಿವೆ ಅವನೆ ರಚಿಸಿದ
ಪ್ರೇಮ ಕವನ
ಕಾಮದಾ ಕೊಳಕಿರದ ಶುದ್ಧ
ಚೈತನ್ಯಮಯ
ನಿರ್ಭೀತ ದೃಢಮನದಿ
ಹಿತ ಕಂಪನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ