ಕಥೆ
ಗಾಢವಾದ ನಿದ್ರೆಯಲ್ಲಿದ್ದಾಗ ಇದ್ದಕ್ಕಿದ್ದ ಹಾಗೆ ರಿಂಗ್
ಆದ ಸದ್ದಿಂದ ಎಚ್ಚರ ಆಯ್ತು.. ` ಅಲಾರಾಂ?? ಇಲ್ಲ ಇದು ಯಾವುದೋ ಕಾಲ್ ಬಂದ ಶಬ್ದ. ಗಡಿಯಾರ ನೋಡಿದೆ..
ರಾತ್ರಿ ಒಂದು ಗಂಟೆ..ಎದೆ ಧಗ್ ಅಂತು... ಫೋನ್ ರಿಸೀವ್ ಮಾಡ್ತಾ ಇವರ ಕಡೆ ನೋಡ್ದೆ.. ಒಳ್ಳೇ ನಿದ್ರೆಲಿದ್ದರು.. `ಹಲೋ' ಅಂದ ತಕ್ಷಣ `ಅಮ್ಮಾ" ಅನ್ನುವ ಎಳೆಯ ದನಿನನ್ನ ನಿದ್ರೆಯ ಮಬ್ಬನ್ನೂ
ಪೂರ್ಣವಾಗಿ ಓಡಿಸಿತು..
ಮಗಳ ಮುಖ ಕಣ್ಮುಂದೆ
ಬಂತು.. `` ಅಮ್ಮಾ , ನನ್ ಮೇಲೆ ನಿಂಗೆ ಸಿಕ್ಕಾಪಟ್ಟೆ
ಕೋಪ ಬಂದಿದೆ.. ಹೇಳ್ದೆ ಕೇಳ್ದೆ ಯಾವನ ಹಿಂದೇನೋ ಓಡಿ
ಹೋದ್ಲು ಅಂತ.. ಆದ್ರೆ ಅಮ್ಮಾ ನನ್ ಮಾತು ಸ್ವಲ್ಪ ಕೇಳು.. ಪ್ಲೀಸ್.. ''
`ಪುಟ್ಟೀ.. '
``ಅಮ್ಮಾ ನಾನು ಹೇಳ್ತೀನಿ
ಇವತ್ತು.. ನೀನು ಯಾವಾಗ್ಲೂ ಹೇಳ್ತಾನೇ ಇರ್ತಿ.. ನನ್ನೆಲ್ಲಾ ಪ್ರಾಬ್ಲಮ್ಗೂ ನಿನ್ ಹತ್ರ ಸಲ್ಯೂಶನ್
ಇದೆ ಅನ್ನೋ ಥರ..ನಂಗೆ ನನ್ ಮಾತನ್ನು ಕೇಳಿಸಿಕೊಳ್ಳೋಕೆ ಯಾರಾದ್ರು ಬೇಕಿತ್ತು.. ಅಮ್ಮಾ, ಪ್ಲೀಜ್
ಫೋನ್ ಇಡ್ಬೇಡ.. ನಂಗೆ ಬೇರೆ ದಾರಿ ಇರ್ಲಿಲ್ಲಾಮ್ಮ.
ನೀನು ಲವ್ ಅನ್ನೋ ಪದದ ಬಗ್ಗೆ ಉರಿದ್ ಬೀಳಿದ್ದೀ,, ನಾನೇನು ಬೇಕಂತ ಲವ್ ಮಾಡ್ಲಿಲ್ಲ .. ಅದೇ ಹೆಂಗೋ
ಆಯ್ತು..
ಕುತೂಹಲಕ್ಕೆ ಏನೋ
ಮಾಡಕ್ಕೆ ಹೋಗಿ ಇನ್ನೇನೋ ಆಯ್ತು.. ಅಮ್ಮಾ, ಕೇಳ್ತಿದೀಯಾ?
``ಹೂ ಹೇಳು ಕಂದಾ''
ಇವರಿಗೆ ಎಚ್ರ ಆಯ್ತು..
ಪ್ರಶ್ನಾರ್ಥಕವಾಗಿ ನೋಡಿದರು.. ನಾನು ಕಣ್ಣೀ.
ರನ್ನು ಒರೆಸುತ್ತಾ
ಸುಮ್ಮನಿರುವಂತೆ ಸೂಚಿಸಿದೆ.. ತಕ್ಷಣ ಇವರು ಲಿವಿಂಗ್ ರೂಮ್ನಿಂದ ಇನ್ನೊಂದು ಹ್ಯಾಂಡ್ ಸೆಟ್ ತಂದು
ಆಲಿಸುತ್ತಾ ನನ್ ಪಕ್ಕ ಕುಳಿತರು..
``ನಿಂಗೆ
ಹೇಳಕ್ಕೆ ಧೈರ್ಯ ಬರ್ಲಿಲ್ಲ.. ನಾವಿಬ್ರು ಚರ್ಚಲ್ಲಿ ಮದ್ವೆ ಆದ್ವಿ.. ಅಮ್ಮಾ ಈಗ ನನ್ ಹೊಟ್ಟೆಲಿ ಪುಟ್ಟ ಮಗು ಇದೆ.. ಈಗ ನಿನ್ನ ತುಂಬಾ
ಮಿಸ್ ಮಾಡ್ಕೋತಿದೀನಿ.. ನಿನ್ನ ಈಗ್ಲೇ ನೋಡಬೇಕನ್ನಿಸ್ತಿದೆ..
ಗಂಟಲುಬ್ಬು ಬಂದಿತ್ತು..
ಕಷ್ಟ ಪಟ್ಟು ಹೇಳಿದೆ.. ``ಹೂಂ..'' ನನ್ನವರ ಕೈಯ್ಯನ್ನು ಭದ್ರವಾಗಿ ಹಿಡಿದುಕೊಂಡೆ...
``ನಾ ಸುಮಾರಾಗಿ ಡ್ರೈವ್ ಮಾಡ್ತೀನಿ.. ನಾನೊಬ್ಳೇ ಬರ್ಲಾ..
ಅಮ್ಮಾ ಕೆವಿನ್ ತುಂಬಾ ಒಳ್ಳೆಯವನು.. ಅವನ್ನ ಕರ್ಕೊಂಡ್ ಬರಕ್ಕೆ ಭಯ ಆಗುತ್ತೆ.. ನೀನು ಅವನನ್ನು ಬೈದರೆ
ಅಂತ.. ಅದಕ್ಕೆ ನಾನೊಬ್ಳೇ ಬರ್ತೀನಿ.. ಆಯ್ತ? ಬರಲಾ
``ಬೇಡ.... ಬೇಡ... ಕಂದಾ ......ನೀನು ಈಗ ಡ್ರೈವ್ ಮಾಡ್ಬೇಡ..
ಕೆವಿನ್ ಜೊತೇನೇ ಬಾ.. ನಾನವನ್ನ್ ಏನೂ ಬೈಯ್ಯಲ್ಲ ..
ಪ್ರಾಮಿಸ್... ಪ್ಲೀಜ್ ಅಮ್ಮಂಗೋಸ್ಕರ ಇದೊಂದ್ ಹೆಲ್ಪ್ ಮಾಡು ಪುಟ್ಟೀ..ಪ್ಲೀಜ್...'' ದೈನ್ಯವಾಗಿ
ಅಳ್ತಾ ಕೇಳಿದೆ...
``ಓಹ್! ಥ್ಯಾಂಕ್
ಯು... ಲವ್ ಯು ಅಮ್ಮಾ.. ಈವಾಗ್ಲೇ ಹೊರಡ್ತೀನಿ..
ಬೈ.. .. '' ಫೋನ್ ಇಟ್ಟ ಸದ್ದು..
ನನ್ನ ಕೆನ್ನೆ ಕಣ್ಣೀರಿಂದ ಒದ್ದೆ ಆಗಿತ್ತು.. ಇವರನ್ನು ನೋಡಿದೆ..
ಅವರ ಕಣ್ಣಲ್ಲೂ ನೀರು.. ಅವರೆದೆಯಲ್ಲಿ ಮುಖ ಹುದುಗಿಸಿದೆ.
ಅವರು ನನ ಕೂದಲು ಸವರ್ತಾ ಕೇಳಿದ್ರು...` ``ನೀನ್ಯಾಕೆ ಅವಳಿಗೆ ರಾಂಗ್ ನಂಬರ್ ಅಂತ ಹೇಳಲಿಲ್ಲ...?''
``ಅದು ಅಂಥ ರಾಂಗ್ ನಂಬರ್ ಆಗಿರ್ಲಿಲ್ಲ..... '' ಅಂತ ಹೇಳಿ
ಎದ್ದು ಮಗಳ ರೂಂ ಗೆ ಹೋದೆ. ಇವರು ಹಿಂಬಾಲಿಸಿದರು .. ಮಗಳು ಹಸುಗೂಸಿನ ಹಾಗೆ ನಿದ್ರಿಸಿದ್ದನ್ನು ನೋಡಿ
ಪ್ರೀತಿ ಉಕ್ಕಿಬಂತು.. ಅವಳ ಹಣೆಗೆ ಹಗುರಾಗಿ ಮುತ್ತಿಟ್ಟೆ.. ಅವಳು ಕಣ್ತೆರೆದು ನಿದ್ದೆ ಮಬ್ಬಲ್ಲಿ ಕೇಳಿದ್ಲು`` ಅಮ್ಮಾ, ಅಪ್ಪಾ
ಏಂಮಾಡ್ತಿದ್ದೀರಿ.....?''
`ಪ್ರಾಕ್ಟೀಸ್.... ' ನಾನಂದೆ.
``ಏಂ ಪ್ರಾಕ್ಟೀಸ್...?'
ನಿದ್ದೆಗೆ ಜಾರ್ತ ಕೇಳಿದ್ಲು..
``ಕೇಳಿಸಿಕೊಳ್ಳೋ ಪ್ರಾಕ್ಟೀಸ್..... '' ಮೆಲ್ಲಗೆ ಉತ್ತರಿಸಿದೆ..
This story made me cry...at the end .after knowing it was a wrong number. Mom is a mom....
ಪ್ರತ್ಯುತ್ತರಅಳಿಸಿThis story made me cry...at the end .after knowing it was a wrong number. Mom is a mom....
ಪ್ರತ್ಯುತ್ತರಅಳಿಸಿ