``ಮಗೂ, ನಿಂಗೆ ಏನಂದ್ರೆ ತುಂಬಾ...
ಇಷ್ಟ?'' ಅಪ್ಪ ಪುಟ್ಟ ಮಗನನ್ನ ಕೇಳಿದ್ರು.
``ಅಪ್ಪಾ, ನಂಗೆ ಈ ಕ್ರೆಯಾನ್
ಬಾಕ್ಸ್ ತುಂಬಾ ಇಷ್ಟ'' ಅಂದ ಮಗ. ಇನ್ನೂ ಅವನ ಬುದ್ಧಿ
ಬೆಳೆದಿಲ್ಲ ಅಂತ ಅಪ್ಪ ಸಮಾಧಾನ ಪಟ್ಕೊಂಡ್ರು.
ಕೆಲವು ವರ್ಷಗಳು ಕಳೆದವು
`` ಪಾಪು, ನಿಂಗೆ ಯಾವ್ದು ತುಂಬಾ ಇಷ್ಟ?'' ಮತ್ತದೇ
ಪ್ರಶ್ನೆಗೆ ಮಿಡ್ಲ್ ಸ್ಕೂಲ್ಗೆ ಹೋಗೋ ಮಗ `` ನಂಗೆ
ಈ ಬ್ಯಾಟು ಬಾಲ್ ಅಂದ್ರೆ ಪ್ರಾಣ ಅಪ್ಪಾ. ಆಡ್ತಾ ಇದ್ರೆ ನಾನೇ ಸಚಿನ್ ಅನ್ಸುತ್ತೆ'' ಅಂದ. ಅಪ್ಪ ನಿರಾಸೆ
ಆದ್ರೂ `ಇನ್ನೂ ಕಾಯ್ತೀನಿ' ಅಂದ್ಕೊಂಡ್ರು
ಮತ್ತೆ ಕೆಲವು ವರ್ಷಗಳ ನಂತ್ರ `` ಬಾಲು ನಿಂಗೇನಂದ್ರೆ ಇಷ್ಟ..... '' ಅಪ್ಪ ಮತ್ತೆ
ಕೇಳಿದ್ರು
ಹೈಸ್ಕೂಲ್ ಓದುತ್ತಿರೋ ಮಗ
`` ಅಪ್ಪಾ , ಈ ವಿಡಿಯೋ ಗೇಮ್ ನನ್ನ ಜೀವ. ಓದು ಬೋರಾದಾಗ ಇದೇ ನನ್ನ ಜೊತೆಗಾರ....'' ಅಂದ.
ನಿರೀಕ್ಷಿತ ಉತ್ತರ ಈಗ್ಲೂ
ಸಿಗಲ್ಲಲ್ವಲ್ಲಾ....? ಅನ್ನಿಸ್ತು. ಅಪ್ಪಂಗೆ
ಪುತ್ರ ರತ್ನ ಕಾಲೇಜಿಗೆ ಹೋಗಿ
ಬಂದಾಗ ಅದೇ ಪ್ರಶ್ನೆ ಕೇಳಿದ್ರು. ಅಷ್ಟರಲ್ಲಿ ಅವನ ಬಳಿ ಒ೦ಡು ಲ್ಯಾಪ್ಟಾಪ್ ಇತ್ತು. ಅವನು ``ಅಪ್ಪಾ ಈ ಲ್ಯಾಪ್ಟಾಪೇ ನನ್ನ ಅತಿ ಪ್ರೀತಿಯ ವಸ್ತು. ಇದರಿಂದ ನನ್ನ ಜ್ಞಾನ ಬೆಳೆಯುತ್ತೆ. ಮನರಂಜನೆ ಕೂಡಾ ಸಿಗುತ್ತೆ....''
ಅಂದ.
ನಿರಾಸೆ ಯನ್ನು ಅಪ್ಪ ಮುಚ್ಚಿಟ್ಟರು
ವರ್ಷಗಳುರುಳಿದವು. ಮಗ ಕೆಲಸಕ್ಕೆ
ಸೇರಿದ. ಒಮ್ಮೆ ಅವನು ಬಿಡುವಾಗಿ ಸಿಕ್ಕಾಗ ಬಂದ ಅಪ್ಪನ
ಮಾಮೂಲಿ ಪ್ರಶ್ನೆಗೆ ಮಗ ಒ೦ದು ಫೋಟೋ ತೋರಿಸಿ ``ಅಪ್ಪಾ ಈ ಹುಡುಗಿ ನಂಗೆ ತುಂಬಾ ಇಷ್ಟ. ಇವಳನ್ನ ಮದುವೆಯಾಗ್ಲಾ....?''
ಅಂದ.
ಅಪ್ಪ ಸಂತೋಷ ಪಟ್ರೂ, ಅದು ಅವರು ಎದುರು ನೋಡುತ್ತಿದ್ದ ಉತ್ತರ ಆಗಿರಲಿಲ್ಲ.....
ಮಗ ತಂದೆಯಾದ. ಅವನ ಆನಂದಕ್ಕೆ
ಪಾರವೇ ಇಲ್ಲ. `` ಅಪ್ಪಾ, ಈ ನನ್ನ ಮಗು ಅಂದ್ರೆ ನನಗೆ ಪಂಚಪ್ರಾಣ''.
ಅಂದ.
ಕೊನೆಗೂ ಅವನು ಅಪ್ಪ ಕೇಳಲು
ಕಾತರಿಸಿದ್ದ ಉತ್ತರ ``ಅಪ್ಪಾ, ತಾಯಿಯಿಲ್ಲದ ನನ್ನನ್ನು ತಂದೆ-ತಾಯಿ ಎರಡೂ ಆಗಿ ಸಾಕಿದ ನೀವೇ ನಮ್ಗೆ
ತುಂಬಾ ಇಷ್ಟ'' ಅಂತ ಕಡೆಗೂ ಹೇಳಲೇ ಇಲ್ಲ.
ಒ೦ಡು ದಿನ ಅಪ್ಪ ನಿದ್ರೆಯಲ್ಲೇ
ಇಹಲೋಕ ತ್ಯಜಿಸಿದರು.
ಮಗ ತೀವ್ರ ಆಘಾತಕ್ಕೊಳಗಾದ.
ತನ್ನ ಪ್ರೀತಿಯ ಕ್ರೇಯಾನ್ ಬಾಕ್ಸ್, ಬ್ಯಾಟ್, ವಿಡಿಯೋಗೇಮ್, ಲ್ಯಾಪ್ಟಾಪ್ ಕೊನೆಗೆ ಪ್ರೀತಿಯ ಹೆಂದತಿ, ಮಗುವೂ ಅವನ
ಮನಸ್ಸಿನ ಖಾಲಿತನವನ್ನು ತುಂಬಲು ಆಗಲಿಲ್ಲ. ಅವನ ಹೃದಯ ಆಗ ಅಳತೊಡಗಿತು ``ಅಪ್ಪಾ ಪ್ರಪಂಚದಲ್ಲಿ ಎಲ್ಲಕ್ಕಿಂತಾ
ನಂಗೆ ನೀನೇ ಇಷ್ಟ......''
mana midiyuvanthe chennagide.
ಪ್ರತ್ಯುತ್ತರಅಳಿಸಿ