ನನ್ನ ತವರು
ಪ್ರೀತಿ ಹೊನಲು ಹರಿಯುತಿರಲಿ ನನ್ನ ತವರಲಿ
ಶಾ೦ತಿ ಮ೦ತ್ರ ಮೊಳಗುತಿರಲಿ ಎಲ್ಲ ಕಡೆಯಲಿ
ಜನ್ಮವಿತ್ತ
ತಾಯಿ ಎ೦ದು ನಗುತಿರಬೇಕು
ಕಣ್ಮಣಿ
ನನ್ನಣ್ಣ೦ದಿರು ಸುಖಪಡಬೇಕು
ಆತ್ಮೀಯತೆ
ಎಲ್ಲರಲೂ ತು೦ಬಿರ ಬೇಕು
ವಿಶ್ವಾಸದ
ದೀಪವು ಸದಾ ಉರಿಯಲೆ ಬೇಕು
ಅತ್ತಿಗೆಯರು
ತೃಪ್ತಿಯಿ೦ದ ಬಾಳುತಲಿರಲಿ
ತುತ್ತನೀವ
ತಾಯ ಮಮತೆ ಅವರೂ ಪಡೆಯಲಿ
ಮುತ್ತಿನ೦ಥ
ಮಕ್ಕಳ ತೊದಲ್ನುಡಿಯು ಕೇಳಲಿ
ಹತ್ತೂರಲು ನನ್ನ ತವರ ಕೀರ್ತಿ ಹರಡಲಿ
ದೈನ್ಯತೆಯಲಿ
ದೇವ ನಿನ್ನನೊ೦ದೇ ಬೇಡುವೆ
ಭಿನ್ನ
ಭಾವ ಬರದಿರಲೆಣ್ಣ೦ದಿರ ನಡುವೆ
ಚಿನ್ನವಾಗಲವರ
ಲಭಿಸಲಿ ಜಯವೆ
ನನ್ನ
ಮರೆಯೆ ಚಿ೦ತೆ ಇಲ್ಲ ನಗುತ ಸಹಿಸುವೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ