`` ನೀನಿನ್ನೂ ಹಿಂದಿನ
ಕಾಲದವಳ ಹಾಗಿದ್ದೀ.. ಈಗಿನ ಕಾಲದಲ್ಲಿ ಎಲ್ಲರೂ ಕುಡೀತಾರೆ,
ನಾನ್ ವೆಜ್ ತಿಂತಾರೆ ...ಸ್ಮೋಕ್ ಸಹಾ ಮಾಡ್ತಾರೆ.. ಈಗ ನಾನೇ ನೋಡು ನಿಂಗಿಂತಾ ದೊಡ್ಡವಳಾದ್ರೂ ಹೇಗೆ
ಹೆಪ್ ಆಗಿದೀನಿ.. ನೀನ್ಯಾಕೆ ಸ್ವಲ್ಪ ಮಾಡ್ ಆಗ್ಬಾರ್ದು....''
ಇದು ಪಾರ್ಟಿಯೊಂದರಲ್ಲಿ ನನ್ನತ್ತ ತೂರಿಬಂದ ಪ್ರಶ್ನೆ..
``ನಿಮ್ಮ ಪ್ರಕಾರ
ಕುಡಿದರೆ, ನಾನ್ ವೆಜ್ ತಿಂದರೆ, ಸ್ಮೋಕ್ ಮಾಡಿದರೆ ಮಾಡ್ರನ್ ಅಂತನ? ನನ್ನ ಅನಿಸಿಕ ಹಾಗಲ್ಲ.. ನೀವು ನನ್ನ ಪೂರ್ವ ಕಾಲದ ಪುಟ್ಟಮ್ಮ
ಅಂತನೇ ಅನ್ನಿ.. ಚಿಂತೆ ಇಲ್ಲ.. '' ಅಂದೆ ನಗ್ತಾ.
ನನ್ ಪ್ರಕಾರ ಮಾಡ್ರನ್
ಆಗಿರೋದಂದರೆ. ಹಿಂದಿನ ಕಾಲದಿಂದ ಬಂದ ಮೂಢನಂಬಿಕೆಗಳನ್ನು ``ಅಜ್ಜ ಹಾಕಿದ ಆಲದ ಮರಕ್ಕೆ ನೇತು ಬೀಳೊ
..'' ಥರ ನಂಬದೇ ಅದನ್ನು ವಿಚಾರದ ಒರೆಗೆ ಹಚ್ಚಿ ನಂಬುವುದು.. ಹಿಂದಿನಿಂದ ಬಂದ ಜಾತೀಯತೆಯಂಥ ಸಾಮಾಜಿಕ
ಪೀಡೆಗಳನ್ನು ವಿರೋಧಿಸುವುದು..
ಒಟ್ಟಿನಲ್ಲಿ ಹಿಂದಿನವರು ಮಾಡಿದ ಯಾವ ಯಾವ ಕೆಲಸಗಳು ತಪ್ಪು
ಎಂದೆನಿಸುತ್ತೋ ಅದನ್ನು ಪುನರಾವರ್ತಿಸದೇ, ನಮ್ಮ ಮನ:ಸ್ಸಾಕ್ಷಿ
ಮೆಚ್ಚುವಂತೆ ಜೀವಿಸುವುದು...